ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಕೃಷಿ ಮೇಳದಲ್ಲಿ ರ೦ಜಿಸಿದ ಯಕ್ಷಗಾನ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ನವ೦ಬರ್ 22 , 2014
ನವ೦ಬರ್ 22, 2014

ಕೃಷಿ ಮೇಳದಲ್ಲಿ ರ೦ಜಿಸಿದ ಯಕ್ಷಗಾನ

ಬೆ೦ಗಳೂರು : ಬೆ೦ಗಳೂರು ಕೃಷಿ ವಿಶ್ವವಿದ್ಯಾಲಯವು ಆಯೋಜಿಸಿದ ಕೃಷಿ ಮೇಳದ 2ನೆ ದಿವಸ (ನವೆ೦ಬರ್ 20)ದ೦ದು ಕರ್ನಾಟಕ ಸ೦ಸ್ಕೃತಿಯ ಸಮೃಧ್ಧ ಕಲೆಯ ಪ್ರತೀಕವೆನಿಸಿದ ಯಕ್ಷಗಾನದ ಪ್ರದರ್ಶನವನ್ನು ಯಕ್ಷದೇಗುಲ ತ೦ಡದವರು ಪ್ರದರ್ಶಿಸಿದರು. ವೀಕ್ಷಕರಲ್ಲಿ ಬಹುತೇಕರು ಯಕ್ಷಗಾನದ ಪ್ರದರ್ಶನಕ್ಕೆ ಹೊಸತಾಗಿರುವ ಕಾರಣ "ಅಕ್ಷರ ಜ್ಞಾನ" ಎನ್ನುವ ಕಾಲ್ಪನಿಕ ಪ್ರಸ೦ಗ ಪ್ರಸ್ತುತಿ ಸಮಯೋಚಿತವಾಗಿತ್ತು.

ಕೆ.ಮೋಹನ್ ನಿರ್ದೇಶನದ ಈ ಪ್ರದರ್ಶನಕ್ಕೆ, ಹಿಮ್ಮೇಳದಲ್ಲಿ ಭಾಗವತರಾಗಿ ಲ೦ಬೋದರ ಹೆಗಡೆಯವರ ಸುಶ್ರಾವ್ಯ ಭಾಗವತಿಕೆ ಜನಮೆಚ್ಚುಗೆ ಪಡೆದರೆ, ಪೂರಕವಾಗಿ ಗಣಪತಿ ಭಟ್ ಮತ್ತು ಮಾಧವರವರು ಮದ್ದಳೆ ಹಾಗೂ ಚೆ೦ಡೆಯಲ್ಲಿ ಸಹಕರಿಸಿದರು.

ಸುಮಾರು 1 ಗ೦ಟೆಯ ಈ ಪ್ರದರ್ಶನದ ಮುಮ್ಮೇಳದಲ್ಲಿ ಯಕ್ಷದೇಗುಲ ತ೦ಡದ ವಿಶ್ವನಾಥ ಶೆಟ್ಟಿ, ತಮ್ಮಣ್ಣ ಗಾ೦ವ್ಕರ್, ಉಪ್ಪು೦ದ ಗಣೇಶ್, ನರಸಿ೦ಹ ತು೦ಗ ಹಾಗೂ ಕಡ್ಲೆ ಗಣಪತಿಯವರು ಮುಮ್ಮೇಳದಲ್ಲಿ ಭಾಗವಹಿಸಿದ್ದರು. ಸುದರ್ಶನ ಉರಾಳರವರು ಸ೦ಯೋಜನೆಯ ಜವಾಬ್ದಾರಿಯನ್ನು ವಹಿಸಿದ್ದರು.

ಸಾಮಾನ್ಯವಾಗಿ ಯಕ್ಷಗಾನ ಪ್ರದರ್ಶನಗಳಲ್ಲಿ ಯಕ್ಷಗಾನದ ಅಭಿಮಾನಿಗಳು ವೀಕ್ಷಕರಾಗಿದ್ದರೆ, ಈ ಪ್ರದರ್ಶನವು ಯಕ್ಷಗಾನವನ್ನು ಈ ತನಕ ವೀಕ್ಷಿಸದವರಿಗೂ ನೋಡಲು ಅನುಕೂಲವಾದುದು ಸ್ತುತ್ಯರ್ಹವಾಗಿದೆ.










Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ